ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

ನಟಿ ಹಾಗೂ ಬಿಗ್ ಬಾಸ್ ಕನ್ನಡ 10 ರ ಸ್ಪರ್ಧಿಯಾದ ಸಿರಿಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ವಿವಾಹದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ನಡೆದಿದೆ.

ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಜೂನ್ 13ರಂದು ಸರಳವಾಗಿ ಸಿರಿಯವರ ಮದುವೆ ನಡೆದಿದ್ದು, ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಶುಭಕೋರಿ ಸಂತಸಪಟ್ಟಿದ್ದಾರೆ.

Leave a Reply

Your email address will not be published. Required fields are marked *