ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯಾದ ಐಶ್ವರ್ಯಾ ಅರ್ಜುನ್ ತಮಿಳಿನ ನಟ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಟ್ಟಿಗೆ ವಿವಾಹವಾಗಿದ್ದಾರೆ.

ಜೂನ್ 10ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಉಮಾಪತಿ ರಾಮಯ್ಯ ಅವರು ಪಂಚೆ ಶರ್ಟ್ ಶಲ್ಯ ಧರಿಸಿದ್ದರೆ, ಇನ್ನು ಐಶ್ವರ್ಯಾ ಅರ್ಜುನ್ ಅವರು ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟು ಮದುವೆಯಲ್ಲಿ ದೇವಲೋಕದ ಕನ್ಯಯಂತೆ ಕಂಗೊಳಿಸುತ್ತಿದ್ದಾರೆ.

ಅರ್ಜುನ್ ಹಿರಿಯ ಪುತ್ರಿ ನಾಯಕಿ ಐಶ್ವರ್ಯಾ ಹಾಗೂ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಯುವ ನಾಯಕ ಉಮಾಪತಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೂನ್ 10 ರಂದು ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ವಿವಾಹ ನಡೆದಿದೆ. ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಐಶ್ವರ್ಯ ಸರ್ಜಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ.

ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಇವರಿಬ್ಬರು ಅಪ್ಪಟ ಸೌತ್ ಇಂಡಿಯನ್ ಜೋಡಿಯಾಗಿ ತುಂಬಾ ಕ್ಯೂಟಾಗಿ ಕಾಣಿಸಿದ್ದಾರೆ. ಕಾಲಿವುಡ್ ನಟ ತಂಬಿ ರಾಮಯ್ಯ ಪುತ್ರನ ಜೊತೆ ಮದುವೆಯಾಗಿರುವ ‘ಪ್ರೇಮ ಬರಹ’ ನಟಿಗೆ ತಮಿಳು ಮತ್ತು ಕನ್ನಡದ ಸೆಲೆಬ್ರಿಟಿಗಳು ಶುಭಕೋರಿದ್ದಾರೆ.