ಕೆಲ ದಿನಗಳ ಹಿಂದೆ ರಾಪರ್ ಚಂದನ್ ಶೆಟ್ಟಿ ಹಾಗೂ ಬೇಬಿ ಡಾಲ್ ನಿವೇದಿತಾ ಗೌಡ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಈಗ ಮತ್ತೊಂದು ಸ್ಯಾಂಡಲ್ವುಡ್ ಜೋಡಿ ವಿಚ್ಛೇದನವನ್ನು ಪಡೆಯುತ್ತಿದ್ದಾರೆ. ದೊಡ್ಮನೆ ಹುಡುಗ ನಟ ಯುವರಾಜ್ ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕಾಗಿದೆ.

ಪತ್ನಿ ಶ್ರೀದೇವಿ ಡಿವೋರ್ಸ್ ನೀಡಲು ಜೂನ್ 6ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್ಗೆ ಯುವ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿಗೆ ಕೋರ್ಟ್ನಿಂದ ಈಗಾಗಲೇ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ 2019ರಲ್ಲಿ ಯುವ ಹಾಗೂ ಶ್ರೀದೇವಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿತ್ತು.

ಜೂನ್ 6ರಂದು ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಯುವರಾಜ್ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಗಳು ಈಗ ಬೇರೆಯಾಗಲು ನಿರ್ಧರಿಸಿದ್ದಾರೆ.