ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ

ನಾಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಪಾಕಿಸ್ತಾನದ ವೇಗಿಗಳ ಮಾರಕ ದಾಳಿಗೆ ತತ್ತರಿಸಿ 19 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಸಿ ಸರ್ವಪತನ ಕಂಡಿತು. ಪಾಕಿಸ್ತಾನದ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ 6 ರನ್‌ ಗಳ ಜಯ ಸಾಧಿಸಿದೆ. 

120 ರನ್‌ ಗಳ ಸವಾಲನ್ನು ನೀಡಿದಾಗ ಪಾಕಿಸ್ತಾನ ಸುಲಭವಾಗಿ ಜಯಗಳಿಸಬಹುದು ಎಂದೇ ಊಹಿಸಲಾಗಿತ್ತು. ಆದರೆ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್‌ ನಿಂದಾಗಿ ಭಾರತ ರೋಚಕ ಜಯ ಸಾಧಿಸಿದೆ. ಪಾಕ್‌ ಸೇನೆಯಿಂದ ಅಭ್ಯಾಸ ಪಡೆದು ವಿಶ್ವಕಪ್‌ಗೆ ಆಗಮಿಸಿದ್ದ ಪಾಕಿಸ್ತಾನ ತಂಡ ಈಗ ಸತತ ಎರಡು ಸೋಲಿನಿಂದ ಗುಂಪು ಹಂತದಲ್ಲೇ ಹೊರಕ್ಕೆ ಹೋಗುವ ಸಾಧ್ಯತೆಯಿದೆ. ಜಸ್ಪ್ರೀತ್ ಬುಮ್ರಾ, ಮಾರಕ ದಾಳಿ ನಡೆಸಿ 4 ಓವರ್‌ನಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ಅದರಲ್ಲೂ 19ನೇ ಓವರ್‌ ನಲ್ಲಿ ಬುಮ್ರಾ ಕೇವಲ 3 ರನ್ ನೀಡುವ ಮೂಲಕ ಪಾಕ್ ಗೆಲುವಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಆರ್ಶದೀಪ್ ಸಿಂಗ್ ಕೇವಲ 11 ರನ್ ನೀಡುವ ಮೂಲಕ ಬುಮ್ರಾ ಭಾರತ ತಂಡಕ್ಕೆ ರೋಚಕ ಗೆಲುವನ್ನು ನೀಡಿದ್ದಾರೆ.

2 ಪಂದ್ಯಗಳಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಅಮೆರಿಕ 4 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ ಕೆನಡಾ 2 ಅಂಕ ಪಡೆದು ಮೂರನೇ ಸ್ಥಾನಲ್ಲಿದೆ. ಎರಡು ಪಂದ್ಯ ಸೋತಿರುವ ಪಾಕಿಸ್ತಾನ ಮತ್ತು ಐರ್ಲೆಂಡ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನಲ್ಲಿದೆ. ಸಧ್ಯ ಭಾರತ ವಿರುದ್ದ ಸೋಲಿನ ರುಚಿ ಸವಿದಿರುವ ಪಾಕಿಸ್ತಾನ ಹಂತ ಹಂತವಾಗಿ ಆಟದಿಂದ ಹೊರ ಹೋಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *