ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಕೋರ್ಟ್ ಮಂಜೂರು ನೀಡಿದೆ . ಇವರಿಬ್ಬರ ನಾಲ್ಕು ವರ್ಷದ ವೈವಾಹಿಕ ಜೀವನ ಅಂತ್ಯಗೊಂಡಿದೆ. ಮೊದಲು ಇದು ಸುಳ್ಳು ಸುದ್ದಿ ಎನ್ನಲಾಗಿತ್ತು. ಬಳಿಕ ಸಿನಿಮಾ ಪ್ರಮೋಷನ್‌ಗೆ ಹೀಗೆ ಮಾಡಿರಬಹುದು ಎಂದುಕೊಳ್ಳಲಾಗಿತ್ತು.

ಆದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದಿಢೀರ್ ಶಾಕ್ ಕೊಟ್ಟಿದ್ದು, ತಾವು ಪರಸ್ಪರ ಒಪ್ಪಿ ದೂರಾಗುತ್ತಿರುವ ಬಗ್ಗೆ ಅಧೀಕೃತವಾಗಿ ತಿಳಿಸಿದ್ದಾರೆ. ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಇಬ್ಬರೂ ಮತ್ತೆ ಕೋರ್ಟ್‌ಗೆ ಹಾಜರಾಗಿದ್ದು, ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ.

ಬಳಿಕ ಇಬ್ಬರೂ ಕೈ ಕೈ ಹಿಡಿದುಕೊಂಡು ಕೋರ್ಟ್‌ನಿಂದ ಹೊರ ನಡೆದಿದ್ದಾರೆ. ಈ ನಡುವೆ ಸಂಜೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.