ಸಿಎಂ ಡಿಸಿಎಂ ಎಷ್ಟು ನಾಟಕ ಮಾಡಿದ್ದಾರೆ ಅಂತ ನಿನ್ನೆ ನೀವೇ ತೋರಿಸಿದ್ದೀರಿ – ಹೆಚ್ ಡಿಕೆ

ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಭ್ರಮೆಯಲ್ಲಿ ಬದುಕುತ್ತಿವೆ, ಮುಂದಿನ 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಸಂಸದ ಕುಮಾರಸ್ವಾಮಿ ಹೇಳಿದ್ದಾರೆ.

NDA ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು ಆದರೆ ಎಂಎಲ್‌ಸಿ ಚುನಾವಣೆಯ ಫಲಿತಾಂಶಗಳು ತಮ್ಮ ಒಂದು ವರ್ಷದ ಆಡಳಿತದ ಬಗ್ಗೆ ಜನರು ಅತೃಪ್ತಿ ಹೊಂದಿದ್ದಾರೆಂದು ಅವರಿಗೆ ಅರಿವಾಯಗಿದೆ ಎಂದು ಹೇಳಿದರು.

ನರೇಂದ್ರ ಮೋದಿ ನಾಯಕತ್ವದಲ್ಲಿ ಮತ್ತೆ ಸರ್ಕಾರ ಮುಂದುವರಿಯಲಿದೆ. ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಸ್ಥಳೀಯ ಪಕ್ಷಗಳಿಗೆ ಸಹ ಖಾತೆ ನೀಡುತ್ತಾರೆ. ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎನ್ನುವುದು ಹೈಕಮಾಂಡ್‌ಗೆ ಗೊತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: – ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ವಿವಾಹ

ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕೊಡಲೇಬೇಕಿತ್ತು ಕೊಟ್ಟಿದ್ದಾರೆ. ಕೊನೆಗೂ ಅತ್ತು ಕರೆದು ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಸಿಎಂ ಎಷ್ಟು ನಾಟಕ ಮಾಡಿದ್ದಾರೆ ಅಂತ ನಿನ್ನೆ ನೀವೇ ತೋರಿಸಿದ್ದೀರಿ ಎಂದು ವ್ಯಂಗ್ಯವಾಡಿದರು.

ನಾಡಿನ ಜನತೆಗೆ, ದೇಶಕ್ಕೆ ಒಳ್ಳೆದಾಗುವ ಖಾತೆ ಸಿಕ್ಕಿದರೆ ಉತ್ತಮವಾಗಿ ಕೆಲಸ ಮಾಡಬಹುದು. ಡಾ. ಮಂಜುನಾಥ್‌ಗೆ ಖಾತೆ ನೀಡುವ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ನಾನು ನಾನು ಒತ್ತಡ ಹಾಕುತ್ತಿಲ್ಲ. ಅವರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಅಷ್ಟೇ. ತೀರ್ಮಾನ ಏನಿದ್ದರೂ ಸಹ ಅವರದ್ದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: – ಚಾಮರಾಜನಗರ- 30 ಮಕ್ಕಳಲ್ಲಿ ಕಾಲರಾ ಪತ್ತೆ

Leave a Reply

Your email address will not be published. Required fields are marked *