ಮೈಸೂರಿನ ಚಾಮರಾಜನಗರದಲ್ಲಿ ತುಂಬಾ ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ಮಕ್ಕಳಲ್ಲಿ ಕಾಲರಾ ಹೆಚ್ಚಾಗಿದೆ. ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಮೇ ತಿಂಗಳಲ್ಲಿ ಸುಮಾರು 30 ಮತ್ತು ಜೂನ್ ನಲ್ಲಿ 12 ಪ್ರಕರಣಗಳು ಕಂಡು ಬಂದಿದೆ.

ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ.ಕೊಳಚೆ ನೀರು ನಿಲ್ಲುವುದು, ಕತ್ತರಿಸಿದ ಹಣ್ಣುಗಳ ಮಾರಾಟ, ಬೀದಿ ಬದಿಯಿಂದ ಜಂಕ್ ಫುಡ್ ಸೇವನೆ ಇವು ಕಾಲರಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ವೈದ್ಯರ ಅನಿಸಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಕಾಲರಾದಿಂದ ದೂರ ಉಳಿಯಲು ನೈರ್ಮಲ್ಯದ ವಾತಾವರಣವನ್ನು ಕಾಪಾಡಿಕೊಳ್ಳುವುದು, ತಾಜಾ ಮತ್ತು ಬಿಸಿ ಆಹಾರ ಸೇವನೆ, ಕಾಯಿಸಿ, ಆರಿಸಿದ ನೀರು. ಐಆರ್’ಎಸ್ ಮತ್ತು ಇತರ ದ್ರವಗಳನ್ನು ಬಳಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕಲುಷಿತ ಆಹಾರ ಮತ್ತು ನೀರಿನಿಂದ ಮಕ್ಕಳು ಜಠರದುರಿತ ಮತ್ತು ಅಜೀರ್ಣವನ್ನು ಸಹ ಅನುಭವಿಸುತ್ತಾರೆ.
ಇದನ್ನೂ ಓದಿ: – ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ವಿವಾಹ