ಖ್ಯಾತ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳಾದ ಐಶ್ವರ್ಯಾ ಸರ್ಜಾ ಅವರ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೂನ್ 10ರಂದು ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಐಶ್ವರ್ಯಾ ಮತ್ತು ಉಮಾಪತಿ ಮದುವೆ ಅದ್ಧೂರಿಯಾಗಿ ಜರುಗಲಿದೆ.

ಜೂನ್ 14ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮದುವೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿ ನೀಡಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್ಮೆಂಟ್ ನಡೆದಿತ್ತು.
ಇದನ್ನೂ ಓದಿ: – ಬಿಜೆಪಿ ಸರ್ಕಾರದಲ್ಲಿಯೂ ಹಣ ವರ್ಗಾವಣೆಯಂತಹ ಘಟನೆಗಳು ನಡೆದಿವೆ – ಡಿಕೆಶಿ