ಲೋಕಸಭೆ ಫಲಿತಾಂಶ ಬಂದ ನಂತರ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಅಲ್ಲದೇ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ನರೇಂದ್ರ ಮೋದಿ ಮತ್ತು ಮಂತ್ರಿ ಮಂಡಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: – MODI : ಜೂನ್ 8 ರಂದು ಮೋದಿ ಪ್ರಮಾಣವಚನ ಸ್ವೀಕಾರ

ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ 292 ಸ್ಥಾನಗಳನ್ನು ಗೆದ್ದಿದ್ದು, ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ನಡೆಸುವುದು ಖಚಿತವಾಗಿದೆ. ಈ ಮೂಲಕ 10 ವರ್ಷಗಳ ನಂತರ ದೇಶದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಇದನ್ನೂ ಓದಿ: – ಹಾಸನದಲ್ಲಿ ರೌಡಿ ಶೀಟರ್ ಭೀಕರ ಹತ್ಯೆ