ದೇಶಾದ್ಯಂತ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಹಾಲಿನ ಪೌಚ್ ಬೆಲೆ ಲೀಟರ್ ಗೆ 2 ರೂ.ನಷ್ಟು ಏರಿಕೆ ಮಾಡಲಾಗಿದೆ. ಎಲ್ಲಾ ರೂಪಾಂತರಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ ರೂ 2 ಹೆಚ್ಚಿಸಲಾಗಿದೆ ಎಂದು ‘ಅಮುಲ್’ ಬ್ರಾಂಡ್ ನ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್ ನ ಎಂಡಿ ಜಯನ್ ಮೆಹ್ತಾ ಹೇಳಿದ್ದಾರೆ.

ಈ ಬೆಲೆ ಏರಿಕೆ ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಶಕ್ತಿ ಅಂಗ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಆದರೆ ಈ ಬೆಲೆ ಏರಿಕೆ ಅಮುಲ್ ತಾಜಾದ ಸಣ್ಣ ಪಾಕೇಟ್ ಗೆ ಅನ್ವಯವಾಗುವುದಿಲ್ಲ. ಪ್ರತಿ ಲೀಟರ್ಗೆ 2 ರೂ. ಹೆಚ್ಚಳದೊಂದಿಗೆ ದರ ಶೇ 3-4ರಷ್ಟು ಅಧಿಕವಾಗಲಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಕೊನೆಯ ಬಾರಿಗೆ ಹಾಲಿನ ದರವನ್ನು ಫೆಬ್ರವರಿ 2023 ರಲ್ಲಿ ಹೆಚ್ಚಿಸಿತ್ತು. ರೈತರಿಗೆ ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈ ಏರಿಕೆ ಅನಿವಾರ್ಯವಾಗಿದೆ ಎಂದು ಮೆಹ್ತಾ ಹೇಳಿದ್ದಾರೆ. ಹೊಸ ಏರಿಕೆಯೊಂದಿಗೆ, 500 ಮಿಲಿ ಅಮುಲ್ ಎಮ್ಮೆ ಹಾಲು, 500 ಮಿಲಿ ಅಮುಲ್ ಗೋಲ್ಡ್ ಹಾಲು ಮತ್ತು 500 ಮಿಲಿ ಅಮುಲ್ ಶಕ್ತಿ ಹಾಲಿನಂತಹ ರೂಪಾಂತರಗಳಿಗೆ ಪರಿಷ್ಕೃತ ಹಾಲಿನ ಬೆಲೆಗಳು ಕ್ರಮವಾಗಿ ರೂ 36, ರೂ 33 ಮತ್ತು ರೂ 30 ರಷ್ಟಿದೆ. ಇದನ್ನೂ ಓದಿ:- ಸದ್ದಿಲ್ಲದೆ ಮದುವೆಯಾಗಿಬಿಟ್ರ ಮಿಲನಾ ನಟಿ ಪಾರ್ವತಿ…!

ಮದರ್ ಡೈರಿ ಸಹ ಹಸು ಹಾಗೂ ಎಮ್ಮೆ ಹಾಲು ಸೇರಿದಂತೆ ವಿವಿಧ ಮಾದರಿಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಿದೆ. ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಇದು ಮೊದಲ ಬಾರಿಗೆ ಬೆಲೆ ಏರಿಕೆಯಾಗಿದೆ. ದೆಹಲಿ ಎನ್ಸಿಆರ್ನಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ತಾಜಾ ಹಾಲು ಮಾರಾಟ ಮಾಡುತ್ತಿರುವ ಮದರ್ ಡೈರಿ 2023ರ ಫೆಬ್ರವರಿಯಲ್ಲಿ ಕೊನೆಯಬಾರಿಗೆ ಹಾಲಿನ ದರವನ್ನು ಹೆಚ್ಚಿಸಿತ್ತು. ಕಳೆದ ಕೆಲವು ತಿಂಗಳಲ್ಲಿ ಹಾಲಿನ ಸಂಗ್ರಹಣೆಗೆ ಹೆಚ್ಚಿನ ಬೆಲೆ ಪಾವತಿಸಿದ್ದರೂ ದರ ಏರಿಕೆ ಮಾಡಿರಲಿಲ್ಲ. ಇತ್ತೀಚೆಗೆ ಕೆಲವೆಡೆ ಬಿಸಿಲಿನ ತಾಪ ಏರಿಕೆಯಿಂದ ಹಾಲಿನ ಉತ್ಪಾದನೆ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ:- ಕೋಲಾರದಲ್ಲಿ ಜೂ. 9 ಕೈವಾರ ತಾತಯ್ಯ ಆರಾಧನೆ