ಸದ್ದಿಲ್ಲದೆ ಮದುವೆಯಾಗಿಬಿಟ್ರ ಮಿಲನಾ ನಟಿ ಪಾರ್ವತಿ…!

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ನಟನೆಯ ಮಿಲನ ಚಿತ್ರದ ನಟಿ ಪಾರ್ವತಿ ತಿರುವೋತ್ತು ಅಲಿಯಾಸ್ ಪಾರ್ವತಿ ಮೆನನ್ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ. ತಮ್ಮ ಸಹಜ ನಟನೆಯ ಮೂಲಕ ಪಾರ್ವತಿ ಗಮನ ಸೆಳೆದಿದ್ದಾರೆ. ಸದ್ಯ ಖಾಸಗಿ ಬದುಕಿನ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಮಿಲನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಾರ್ವತಿ ಮೆನನ್ ಮಳೆ ಬರಲಿ ಮಂಜೂ ಇರಲಿ, ಪೃಥ್ವಿ ಮತ್ತು ಅಂದರ್ ಬಾಹರ್‌ ಸಿನಿಮಾಗಳಲ್ಲಿ ನಟಿಸಿ ಕನ್ನಡ ಮನಸ್ಸಿಗೆ ಹತ್ತಿರವಾಗಿಬಿಟ್ಟರು. 

36 ವರ್ಷದ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಂಪು ಸೀರೆ ಧರಿಸಿ ಪಕ್ಕಾ ಮಲಯಾಳಿ ರೀತಿಯಲ್ಲಿ ಪಾರ್ವತಿ ಕಾಣಿಸಿಕೊಂಡರೆ ಗ್ರೇ ಆಂಡ್ ವೈಟ್ ಕಾಂಬಿನೇಷನ್‌ ಸೂಟ್‌ನಲ್ಲಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ಅಕ್ಕ ಪಕ್ಕ ಸಿನಿಮಾ ಸ್ಟಾರ್‌ ಗಳು ಇದ್ದಾರೆ. ಈಗ ವೈರಲ್ ಆಗುತ್ತಿರುವ ಮದುವೆ ಫೋಟೋ ನೋಡಿ ಶಾಕ್ ಆಗಿದ್ದಾರೆ.

ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು. ಸತ್ಯ ಏನೆಂದರೆ ಪಾರ್ವತಿ ಮೆನನ್ ಮದುವೆಯಾಗಿಲ್ಲ. ಇದು ಅವರ ಮುಂದಿನ ಸಿನಿಮಾ ‘ಮೆಲ್ಲೋಜುಕ್ಕು’ ಫೋಟೋ ಎನ್ನಲಾಗಿದೆ. ಕ್ರಿಸ್ಟೋ ಟಾಮಿ ನಿರ್ದೇಶನ ಮಾಡಿರುವ ಈ ಚಿತ್ರದ 45  ಸೆಕೆಂಡ್ ಪ್ರೋಮೋ ಒಂದು ಬಿಡುಗಡೆಯಾಗಿದೆ ಅದರಲ್ಲಿ ಇವರಿಬ್ಬರು ಅಕ್ಕ ಪಕ್ಕ ಮಧುಮಕ್ಕಳಂತೆ ನಿಂತಿದ್ದಾರೆ.

ಇದನ್ನೂ ಓದಿ :- ದೇಶಾದ್ಯಂತ ಹೈವೇಗಳಲ್ಲಿ ಟೋಲ್‌ ಶುಲ್ಕ ಹೆಚ್ಚಳ

Leave a Reply

Your email address will not be published. Required fields are marked *